ಹೋಮ್ ಲೋನ್ ಟಾಪ್-ಅಪ್ ಎಂದರೇನು?
ಟಾಪ್-ಅಪ್ ಲೋನ್ ಈಗಾಗಲೇ ಚಾಲ್ತಿಯಲ್ಲಿರುವ ಹೋಮ್ ಲೋನ್ ಹೊಂದಿರುವ ಮತ್ತು ಹೆಚ್ಚುವರಿ ಹಣವನ್ನು ಪಡೆಯಲು ಬಯಸುವ ಸಾಲಗಾರರಿಗೆ ಸುಲಭವಾದ ರಿಫೈನಾನ್ಸಿಂಗ್ ಆಯ್ಕೆಯಾಗಿದೆ. ಹೋಮ್ ಲೋನ್ ಟಾಪ್-ಅಪ್ ಅನ್ನು ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕವೂ ಸುಲಭಗೊಳಿಸಬಹುದು, ಇದರಲ್ಲಿ ನೀವು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಕ್ಕಾಗಿ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡುತ್ತೀರಿ.
ನೀವು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡಿದಾಗ, ನಿಮ್ಮ ಅರ್ಹತೆಯ ಆಧಾರದ ಮೇಲೆ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನ್ ಪಡೆಯುವ ಆಯ್ಕೆಯನ್ನು ನೀವು ಹೊಂದಿದ್ದೀರಿ - ನಿಮಗೆ ಗಣನೀಯ ಲೋನ್ ಮಂಜೂರಾತಿಗೆ ಅಕ್ಸೆಸ್ ನೀಡುವುದರ ಜೊತೆಗೆ ನಿಮ್ಮ ಒಟ್ಟು ಹೋಮ್ ಲೋನ್ ವೆಚ್ಚದಲ್ಲಿ ಉಳಿತಾಯ ಮಾಡಲು ಅವಕಾಶ ನೀಡುತ್ತದೆ.
ಇತರ ಭದ್ರತೆ ರಹಿತ ಲೋನ್‌ಗಳಿಗೆ ಹೋಲಿಸಿದರೆ ಟಾಪ್-ಅಪ್ ಹೋಮ್ ಲೋನ್ ಮಂಜೂರಾತಿಯು ತುಲನಾತ್ಮಕವಾಗಿ ಕಡಿಮೆ ಬಡ್ಡಿ ದರವನ್ನು ಹೊಂದಿದೆ. ಇದಲ್ಲದೆ, ಇದು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಬರುತ್ತದೆ ಮತ್ತು ಯಾವುದೇ ವಸತಿ ಸಂಬಂಧಿತ ವೆಚ್ಚಗಳನ್ನು ಪೂರೈಸಲು ಬಳಸಬಹುದು. ರಿಫೈನಾನ್ಸಿಂಗ್ ನಿಮ್ಮ ಆದ್ಯತೆಯಾಗಿದ್ದರೆ, ಬಜಾಜ್ ಹೌಸಿಂಗ್ ಫೈನಾನ್ಸ್ ಟಾಪ್-ಅಪ್ ಲೋನಿಗಿಂತ ಬೇರೆಯದನ್ನು ನೋಡಬೇಡಿ.
ಟಾಪ್-ಅಪ್ ಲೋನಿನ ಫೀಚರ್‌ಗಳು ಮತ್ತು ಪ್ರಯೋಜನಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಟಾಪ್-ಅಪ್ ಲೋನಿನೊಂದಿಗೆ, ಅದು ನೀಡುವ ಪ್ರಯೋಜನಗಳು ಇಲ್ಲಿವೆ:
![](/documents/37350/58914/11-Annual+savings.webp/6d2abfa9-22d4-4c4c-0920-82fc7f6e6047?t=1651316336031)
ರೂ. 1 ಕೋಟಿಯ ಲೋನ್ ಮೊತ್ತ*
ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಮಂಜೂರಾತಿಯೊಂದಿಗೆ ನಿಮ್ಮ ಚಾಲ್ತಿಯಲ್ಲಿರುವ ಹೋಮ್ ಲೋನ್ ಮೇಲೆ ಟಾಪ್-ಅಪ್ ಪಡೆಯಿರಿ. ನಿಮ್ಮ ಅರ್ಹತೆಯ ಆಧಾರದ ಮೇಲೆ ಮೊತ್ತವನ್ನು ಮಂಜೂರು ಮಾಡಲಾಗುತ್ತದೆ.
![](/documents/37350/58914/20-Interest+rate.webp/4c0735b4-51ba-c6e0-0246-057d82abd6da?t=1651316338117)
ಸ್ಪರ್ದಾತ್ಮಕ ಬಡ್ಡಿದರ
ಅರ್ಹ ಸಾಲಗಾರರು ಇತರ ಅನುಕೂಲಕರ ನಿಯಮಗಳೊಂದಿಗೆ ಸಂಬಳ ಪಡೆಯುವ ಅರ್ಜಿದಾರರಿಗೆ ವರ್ಷಕ್ಕೆ 9.10%* ರಷ್ಟು ಕಡಿಮೆ ಹೋಮ್ ಲೋನ್ ಟಾಪ್-ಅಪ್ ಬಡ್ಡಿ ದರಗಳನ್ನು ಪಡೆಯಬಹುದು
![](/documents/37350/58914/our+offerings+3.webp/be287ac5-1c08-5a04-0a77-c59b0e89c0a2?t=1651316340928)
ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿ
ಲೋನ್ ಮೊತ್ತವು ಅಂತಿಮ ಬಳಕೆಯ ಫ್ಲೆಕ್ಸಿಬಿಲಿಟಿಯೊಂದಿಗೆ ಬರುವುದರಿಂದ, ಮನೆ ನವೀಕರಣದಂತಹ ಎಲ್ಲಾ ವಸತಿ ವೆಚ್ಚಗಳನ್ನು ಪರಿಹರಿಸಲು ನೀವು ಅದನ್ನು ಬಳಸಬಹುದು.
![](/documents/37350/58914/24-Online+application+form.webp/9452a154-a53c-ec39-19ba-817402efbbcf?t=1651316339065)
ಸುಲಭ ಅಪ್ಲಿಕೇಶನ್
ಟಾಪ್-ಅಪ್ ಲೋನಿಗೆ ಅಪ್ಲೈ ಮಾಡುವ ಪ್ರಕ್ರಿಯೆಯು ತೊಂದರೆ ರಹಿತವಾಗಿದೆ. ಅಸ್ತಿತ್ವದಲ್ಲಿರುವ ಹೋಮ್ ಲೋನ್ ಸಾಲಗಾರರು ಅಥವಾ ತಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ನಮಗೆ ವರ್ಗಾಯಿಸಲು ಬಯಸುವವರು ಕ್ರಮವಾಗಿ ನಮ್ಮ ಗ್ರಾಹಕ ಪೋರ್ಟಲ್ ಅಥವಾ ಹೋಮ್ ಲೋನ್ ಅಪ್ಲಿಕೇಶನ್ ಫಾರ್ಮ್ ಮೂಲಕ ಟಾಪ್-ಅಪ್ ಹೋಮ್ ಲೋನಿಗೆ ಅಪ್ಲೈ ಮಾಡಬಹುದು.
![](/documents/37350/58914/11-Annual+savings.webp/6d2abfa9-22d4-4c4c-0920-82fc7f6e6047?t=1651316336031)
ಸರಳ ಅರ್ಹತಾ ಮಾನದಂಡಗಳು
ಟಾಪ್-ಅಪ್ ಲೋನಿಗೆ ಅರ್ಹತಾ ಮಾನದಂಡವು ಹೋಮ್ ಲೋನಿನಂತೆಯೇ ಇರುತ್ತದೆ. ಅದನ್ನು ಪಡೆಯುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ
![](/documents/37350/58914/11-Annual+savings.webp/6d2abfa9-22d4-4c4c-0920-82fc7f6e6047?t=1651316336031)
ತ್ವರಿತ ಪ್ರಕ್ರಿಯೆ ಮತ್ತು ವಿತರಣೆ
ಈಗಾಗಲೇ ಹೋಮ್ ಲೋನ್ ಪಡೆದ ಸಾಲಗಾರರಿಗೆ ಟಾಪ್-ಅಪ್ ಲೋನನ್ನು ನೀಡಲಾಗುತ್ತದೆ. ಸಾಲಗಾರರು ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ಟಾಪ್-ಅಪ್ ಲೋನಿಗೆ ಅನುಮೋದನೆ ಪಡೆಯಲು ಅವರು ಉತ್ತಮ ಅವಕಾಶವನ್ನು ಪಡೆಯಬಹುದು.
ಟಾಪ್-ಅಪ್ ಲೋನಿಗೆ ಅರ್ಹತಾ ಮಾನದಂಡ
ನೀವು ನಮ್ಮೊಂದಿಗೆ ಚಾಲ್ತಿಯಲ್ಲಿರುವ ಹೋಮ್ ಲೋನ್ ಹೊಂದಿದ್ದರೆ, ಟಾಪ್-ಅಪ್ ಲೋನಿಗೆ ಅರ್ಹತಾ ಅವಶ್ಯಕತೆಗಳು ಹೋಮ್ ಲೋನಿಗೆ ಸಮಾನವಾಗಿರುತ್ತವೆ. ಈ ಮಾನದಂಡಗಳನ್ನು ಹೊರತುಪಡಿಸಿ, ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಆಯ್ಕೆ ಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:
- ಟಾಪ್-ಅಪ್ ಲೋನ್‌ನೊಂದಿಗೆ ಇನ್ನೊಂದು ಹಣಕಾಸು ಸಂಸ್ಥೆಯ ಹೋಮ್ ಲೋನ್‌ನಿಂದ ಬ್ಯಾಲೆನ್ಸ್ ವರ್ಗಾವಣೆಯನ್ನು ಸಂಯೋಜಿಸುವಾಗ, ಸ್ಥಿರ ಮರುಪಾವತಿಯ ಒಂದು ವರ್ಷದ ದಾಖಲೆಯನ್ನು ಹೊಂದುವುದು ಮುಖ್ಯವಾಗಿದೆ
- ನೀವು ಕನಿಷ್ಠ 6 ತಿಂಗಳವರೆಗೆ ಅಸ್ತಿತ್ವದಲ್ಲಿರುವ ಅಡಮಾನವನ್ನು ಸಂಪೂರ್ಣವಾಗಿ ಪಾವತಿಸಿರಬೇಕು
ನೀವು ತಪ್ಪಿದ ಯಾವುದೇ ಇಎಂಐಗಳನ್ನು ಕ್ಲಿಯರ್ ಮಾಡುವುದು ಮತ್ತು ಹಿಂದಿನ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ತಪ್ಪಿದ ಪಾವತಿ ಇಲ್ಲ ಎಂದು ಖಚಿತಪಡಿಸಿಕೊಳ್ಳುವುದನ್ನು ಸಲಹೆ ನೀಡಲಾಗುತ್ತದೆ
ಈ ಅವಶ್ಯಕತೆಗಳು ಸಾಮಾನ್ಯ ರೂಪದಲ್ಲಿರುತ್ತವೆ ಮತ್ತು ಟಾಪ್-ಅಪ್ ಲೋನಿಗಾಗಿ ನೀವು ಸಂಪರ್ಕಿಸುವ ಸಾಲದಾತರ ನಿರ್ದಿಷ್ಟ ನೀತಿಗಳ ಆಧಾರದ ಮೇಲೆ ಬದಲಾಗಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
ಟಾಪ್-ಅಪ್ ಲೋನಿಗೆ ಬಡ್ಡಿ ದರಗಳು ಮತ್ತು ಶುಲ್ಕಗಳು
ನಮ್ಮಿಂದ ಹೋಮ್ ಲೋನ್ ಟಾಪ್-ಅಪ್‌ನೊಂದಿಗೆ, ಭದ್ರತೆ ರಹಿತ ಲೋನ್‌ಗಳಿಗೆ ಹೋಲಿಸಿದರೆ ನೀವು ಆಕರ್ಷಕ ಬಡ್ಡಿ ದರಗಳಿಂದ ಪ್ರಯೋಜನ ಪಡೆಯಬಹುದು. ನಿಮ್ಮ ಹೋಮ್ ಲೋನ್‌ನಿಂದ ಕವರ್ ಆಗದ ಹೆಚ್ಚುವರಿ ಹೌಸಿಂಗ್ ವೆಚ್ಚಗಳನ್ನು ಸುಲಭವಾಗಿ ಪರಿಹರಿಸಲು ಇದು ನಿಮಗೆ ಅವಕಾಶ ನೀಡುತ್ತದೆ.
ಸಂಬಳ ಪಡೆಯುವ ಮತ್ತು ವೃತ್ತಿಪರರಾಗಿರುವ ಅರ್ಹ ಅರ್ಜಿದಾರರು ವರ್ಷಕ್ಕೆ ಕೇವಲ 9.10%* ರಿಂದ ಆರಂಭವಾಗುವ ಗಣನೀಯ ಟಾಪ್-ಅಪ್ ಲೋನ್ ಮಂಜೂರಾತಿಯನ್ನು ಆನಂದಿಸಬಹುದು ಮತ್ತು ಲೋನ್ ಅವಧಿಯಲ್ಲಿ ಆರಾಮದಾಯಕವಾಗಿ ಮೊತ್ತವನ್ನು ಮರುಪಾವತಿ ಮಾಡಬಹುದು.
ಟಾಪ್-ಅಪ್ ಲೋನಿಗೆ ನಮ್ಮ ಫೀಸು ಮತ್ತು ಶುಲ್ಕಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಇಲ್ಲಿ ಕ್ಲಿಕ್ ಮಾಡಿ.
ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಲು ಹಂತವಾರು ಪ್ರಕ್ರಿಯೆ
ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಲು ಆರಂಭಿಸುವ ಮೊದಲು, ನಿಮ್ಮ ಮಾಸಿಕ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಲು ನೀವು ನಮ್ಮ ಹೋಮ್ ಲೋನ್‌ಗಾಗಿ ಇಎಂಐ ಕ್ಯಾಲ್ಕುಲೇಟರ್ ಬಳಸಬಹುದು. ಟಾಪ್-ಅಪ್ ಲೋನಿಗೆ ಅಪ್ಲೈ ಮಾಡಲು, ಈ ಸರಳ ಹಂತಗಳನ್ನು ಅನುಸರಿಸಿ
- ಈ ಪುಟದ ಬಲ ಮೂಲೆಯಲ್ಲಿರುವ 'ಆನ್ಲೈನಿನಲ್ಲಿ ಅಪ್ಲೈ ಮಾಡಿ' ಬಟನ್ ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ನೀವು ನಮ್ಮ ಹೌಸಿಂಗ್ ಲೋನ್ ಅಪ್ಲಿಕೇಶನ್ ಫಾರ್ಮ್ ಗೆ ನ್ಯಾವಿಗೇಟ್ ಮಾಡಬಹುದು.
- ನಿಮ್ಮ ಹೆಸರು ಮತ್ತು ಮೊಬೈಲ್ ನಂಬರ್‌ನಂತಹ ಮೂಲ ವಿವರಗಳನ್ನು ಒದಗಿಸಿ ಮತ್ತು ಉದ್ಯೋಗದ ಪ್ರಕಾರವನ್ನು ಆಯ್ಕೆಮಾಡಿ.
- 'ಲೋನ್ ಪ್ರಕಾರವನ್ನು ಆಯ್ಕೆಮಾಡಿ' ಕ್ಷೇತ್ರದಲ್ಲಿ, 'ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ + ಟಾಪ್-ಅಪ್ ಲೋನ್' ಆಯ್ಕೆಮಾಡಿ'.
- ನಿಮ್ಮ ಮೊಬೈಲ್ ನಂಬರನ್ನು ಪರಿಶೀಲಿಸಲು 'ಒಟಿಪಿ ಜನರೇಟ್ ಮಾಡಿ' ಮೇಲೆ ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಜಾಗದಲ್ಲಿ ನಮೂದಿಸಿ.
- ನಿಮಗೆ ಅಗತ್ಯವಿರುವ ಲೋನ್ ಮೊತ್ತವನ್ನು ನಮೂದಿಸಿ ಮತ್ತು ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಿ.
- ನಿಮ್ಮ ವೈಯಕ್ತಿಕ, ಉದ್ಯೋಗ, ಹಣಕಾಸು ಮತ್ತು ಆಸ್ತಿ ಸಂಬಂಧಿತ ಮಾಹಿತಿಯನ್ನು ನಮೂದಿಸಿ.
- ಅರ್ಜಿ ಸಲ್ಲಿಸಿ.
ಒಮ್ಮೆ ನೀವು ಫಾರ್ಮ್ ಸಲ್ಲಿಸಿದ ನಂತರ, ನಿಮ್ಮ ಅಪ್ಲಿಕೇಶನ್ ಸಲ್ಲಿಸಿದ 24 ಗಂಟೆಗಳ* ಒಳಗೆ ನಮ್ಮ ಪ್ರತಿನಿಧಿ ನಿಮ್ಮನ್ನು ಸಂಪರ್ಕಿಸುತ್ತಾರೆ. ಮುಂದಿನ ಹಂತಗಳ ಬಗ್ಗೆ ಚರ್ಚಿಸಲು ಮತ್ತು ಹೆಚ್ಚಿನ ಮಾರ್ಗದರ್ಶನವನ್ನು ಒದಗಿಸಲು ಅವರು ನಿಮ್ಮನ್ನು ಸಂಪರ್ಕಿಸುತ್ತಾರೆ
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಟಾಪ್-ಅಪ್ ಲೋನ್: ಆಗಾಗ ಕೇಳುವ ಪ್ರಶ್ನೆಗಳು
ಹೋಮ್ ಲೋನ್ ಟಾಪ್-ಅಪ್ ಈಗಾಗಲೇ ಹೌಸಿಂಗ್ ಲೋನ್ ಹೊಂದಿರುವವರಿಗೆ ಉಪಯುಕ್ತ ರಿಫೈನಾನ್ಸಿಂಗ್ ಆಯ್ಕೆಯಾಗಿದೆ. ನಿಮ್ಮ ಅಸ್ತಿತ್ವದಲ್ಲಿರುವ ಹೋಮ್ ಲೋನ್ ಬ್ಯಾಲೆನ್ಸ್‌ಗಿಂತ ಹೆಚ್ಚಿನ ನಿರ್ದಿಷ್ಟ ಮೊತ್ತವನ್ನು ಸಾಲ ಪಡೆಯಲು ಇದು ನಿಮಗೆ ಅನುಮತಿ ನೀಡುತ್ತದೆ. ನಿಯಮಿತ ಹೋಮ್ ಲೋನ್‌ನಂತಲ್ಲದೆ, ಟಾಪ್-ಅಪ್ ಫ್ಲೆಕ್ಸಿಬಲ್ ಅಂತಿಮ ಬಳಕೆಯೊಂದಿಗೆ ಬರುತ್ತದೆ. ಮನೆ ನವೀಕರಣ, ದುರಸ್ತಿ ಅಥವಾ ರಿಮಾಡೆಲಿಂಗ್‌ನಂತಹ ವಸತಿ ಸಂಬಂಧಿತ ಅಗತ್ಯಗಳಿಗೆ ನೀವು ಅದನ್ನು ಬಳಸಬಹುದು.
ಟಾಪ್-ಅಪ್ ಲೋನ್‌ಗಳ ಬಡ್ಡಿ ದರಗಳು ಸಾಮಾನ್ಯವಾಗಿ ಭದ್ರತೆ ರಹಿತ ಲೋನ್‌ಗಳಿಗಿಂತ ಕಡಿಮೆಯಾಗಿರುತ್ತವೆ, ಇದು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವವರಿಗೆ ಉತ್ತಮ ಆಯ್ಕೆಗಳಾಗಿವೆ.
ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಅಸ್ತಿತ್ವದಲ್ಲಿರುವ ಹೋಮ್ ಲೋನನ್ನು ಹೊಂದಿದ್ದರೆ, ನೀವು ಟಾಪ್-ಅಪ್ ಲೋನನ್ನು ಪಡೆಯಬಹುದು. ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಮೂಲಕವೂ ನೀವು ಅದನ್ನು ಪಡೆಯಬಹುದು, ಇದರಲ್ಲಿ ನೀವು ಹೆಚ್ಚು ಸ್ಪರ್ಧಾತ್ಮಕ ಬಡ್ಡಿ ದರಕ್ಕಾಗಿ ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ಬಜಾಜ್ ಹೌಸಿಂಗ್ ಫೈನಾನ್ಸ್‌ಗೆ ಟ್ರಾನ್ಸ್‌ಫರ್ ಮಾಡಬಹುದು.
ಟಾಪ್-ಅಪ್ ಲೋನ್ ಪಡೆಯಲು ನೀವು ಮೂಲಭೂತ ಅಂಶಗಳನ್ನೊಳಗೊಂಡ ಡಾಕ್ಯುಮೆಂಟೇಶನ್ ಒದಗಿಸಬೇಕಾಗುತ್ತದೆ.ಇದು ಕೆವೈಸಿ ಪರಿಶೀಲನೆಗೆ ಅಗತ್ಯವಿರುವ ಆಧಾರ್ ಕಾರ್ಡ್, ವೋಟರ್ ಐಡಿ ಕಾರ್ಡ್, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಹಾಗೂ ಇತ್ತೀಚಿನ ಫೋಟೋಗಳಂತಹ ಡಾಕ್ಯುಮೆಂಟ್‌ಗಳನ್ನು ಒಳಗೊಂಡಿದೆ. ಪ್ಯಾನ್ ಕಾರ್ಡ್ ಅಥವಾ ಫಾರ್ಮ್ 60 ಕಡ್ಡಾಯ ಡಾಕ್ಯುಮೆಂಟ್‌ಗಳಾಗಿವೆ.
ಸಂಬಳ ಪಡೆಯುವ ಅರ್ಜಿದಾರರು ತಮ್ಮ ಇತ್ತೀಚಿನ ಸಂಬಳದ ಸ್ಲಿಪ್‌ಗಳು ಮತ್ತು ಆದಾಯ ಪುರಾವೆಗಾಗಿ ಅಕೌಂಟ್ ಸ್ಟೇಟ್ಮೆಂಟ್‌ಗಳನ್ನು ಒದಗಿಸಬೇಕಾಗುತ್ತದೆ. ಸ್ವಯಂ ಉದ್ಯೋಗಿ ಅರ್ಜಿದಾರರು ತಮ್ಮ ಇತ್ತೀಚಿನ ಪಿ ಮತ್ತು ಎಲ್ ಸ್ಟೇಟ್ಮೆಂಟ್‌ಗಳು, ಐಟಿಆರ್ ಮತ್ತು ಬಿಸಿನೆಸ್ ವಿಂಟೇಜ್ ಪುರಾವೆಯನ್ನು ಒದಗಿಸಬೇಕು
ಈ ಅವಶ್ಯಕತೆಗಳು ಸೂಚನಾತ್ಮಕವಾಗಿವೆ ಮತ್ತು ಸಾಲದಾತರು ಹೆಚ್ಚುವರಿ ಡಾಕ್ಯುಮೆಂಟ್‌ಗಳನ್ನು ಕೇಳಬಹುದು ಎಂಬುದನ್ನು ಗಮನಿಸಿ.
ನೀವು ಅಸ್ತಿತ್ವದಲ್ಲಿರುವ ಹೋಮ್ ಲೋನ್ ಹೊಂದಿರುವಾಗ, ನಿಮ್ಮ ಹೋಮ್ ಲೋನ್ ಬ್ಯಾಲೆನ್ಸ್ ಅನ್ನು ನಮಗೆ ಟ್ರಾನ್ಸ್‌ಫರ್ ಮಾಡುವ ಮೂಲಕ ನೀವು ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಟಾಪ್-ಅಪ್ ಲೋನನ್ನು ಪಡೆಯಬಹುದು. ಆದಾಗ್ಯೂ, ಟಾಪ್-ಅಪ್ ಲೋನ್ ಪಡೆಯಲು ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ.
ಟಾಪ್-ಅಪ್ ಲೋನ್‌ಗಳು ಕಡಿಮೆ ಬಡ್ಡಿ ದರಗಳು ಮತ್ತು ದೀರ್ಘ ಅವಧಿಗಳೊಂದಿಗೆ ಬರುತ್ತವೆ. ಮನೆ ನವೀಕರಣದಂತಹ ಯಾವುದೇ ವಸತಿ ಸಂಬಂಧಿತ ವೆಚ್ಚಗಳನ್ನು ಪರಿಹರಿಸಲು ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಟಾಪ್-ಅಪ್ ಲೋನನ್ನು ಪಡೆಯಬಹುದು.
ಹೋಮ್ ಲೋನ್ ಟಾಪ್-ಅಪ್ 9.10%* ರಿಂದ ಆರಂಭವಾಗುತ್ತದೆ ಮತ್ತು ಸಂಬಳ ಪಡೆಯುವ ಮತ್ತು ವೃತ್ತಿಪರ ಅರ್ಜಿದಾರರಿಗೆ 17.00%* ವರೆಗೆ ಹೋಗಬಹುದು.
ಹೌದು, ಈ ಕೆಳಗಿನ ವಿಭಾಗಗಳ ಅಡಿಯಲ್ಲಿ ಟಾಪ್-ಅಪ್ ಲೋನ್‌ಗಳ ಮೇಲೆ ನೀವು ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು:
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C - ಅಸಲು ಮರುಪಾವತಿಯ ಮೇಲೆ ಗರಿಷ್ಠ ರೂ. 1.5 ಲಕ್ಷ ಕಡಿತ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 24(b) - ಪಾವತಿಸಿದ ಬಡ್ಡಿಯ ಮೇಲೆ ಗರಿಷ್ಠ ರೂ. 2 ಲಕ್ಷ ಕಡಿತ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಇಇ - ಸೆಕ್ಷನ್ 24(ಬಿ) ಮತ್ತು ಸೆಕ್ಷನ್ 80ಸಿ ನಂತರ ಕಡಿತಗಳಿಗೆ ಹೆಚ್ಚುವರಿಯಾಗಿ ಮೊದಲ ಬಾರಿಯ ಮನೆ ಖರೀದಿದಾರರಿಗೆ ಹೆಚ್ಚುವರಿ ರೂ. 50,000 ಕಡಿತ.
ಸಂಬಂಧಿತ ಲೇಖನಗಳು
![](/documents/37350/146866/Related+Articals+1.webp/d4e65cb6-7a0f-1b47-585e-ce3bbd711513?t=1660719695220)
ನಿಮ್ಮ ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ
342 2 ನಿಮಿಷ
![](/documents/37350/146866/Related+Articals+2.webp/ce0f6dd8-0404-0d58-9ca3-88b29a436372?t=1660719695509)
ಹೋಮ್ ಲೋನ್‌ಗಳ ವಿಧಗಳು
682 3 ನಿಮಿಷ
![](/documents/37350/146866/Related+Articals+4.webp/ce52c352-7912-fa91-818e-e67f6164ffc4?t=1660719696020)
ಹೋಮ್ ಲೋನ್ ಅನ್ನು ತ್ವರಿತವಾಗಿ ಮರುಪಾವತಿಸುವುದು ಹೇಗೆ
631 2 ನಿಮಿಷ
ಇದು ಕೂಡ ಜನರ ಪರಿಗಣನೆಗೆ
![](/documents/37350/39651/PeopleConsider1.png/1594295a-763c-990e-fd9b-04b417bae49d?t=1651748838927)
![](/documents/37350/39651/PeopleConsider2.png/73fdda1d-ccf2-9526-7bf2-b9eed6433f79?t=1651748838849)
![](/documents/37350/39651/PeopleConsider3.png/270d1694-85a7-62fa-3b3a-74bd476f4a8b?t=1651748838771)
![](/documents/37350/39651/Article1.png/277c918c-d016-79f7-bf51-af7f8b57ebe4?t=1646467492426)
![Apply Online For Home Loan](/documents/37350/45758/online-home-loan.png/ed86d575-9def-d656-3820-835ae17104ec?t=1648290493595)