ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಲೆಕ್ಕ ಹಾಕಿ
ಎಲ್ಲಾ ಕ್ಯಾಲ್ಕುಲೇಟರ್‌ಗಳು
ಗೃಹ ಸಾಲ ಪಡೆಯಲು ಅರ್ಹತೆ ಏನು?
ಹೋಮ್ ಲೋನ್‌ಗೆ ಅರ್ಹತೆಯು ಮಾಸಿಕ ಆದಾಯ, ಪ್ರಸ್ತುತ ವಯಸ್ಸು, ಕ್ರೆಡಿಟ್ ಸ್ಕೋರ್, ನಿಗದಿತ ಮಾಸಿಕ ಹಣಕಾಸಿನ ಜವಾಬ್ದಾರಿಗಳು, ಕ್ರೆಡಿಟ್ ಇತಿಹಾಸ ಮತ್ತು ನಿವೃತ್ತಿ ವಯಸ್ಸು ಮುಂತಾದ ವಿವಿಧ ಅಂಶಗಳ ಆಧಾರದ ಮೇಲೆ ಇರುತ್ತದೆ.
ಹೋಮ್ ಲೋನ್ ಅರ್ಹತೆಯು ನಿರ್ದಿಷ್ಟ ಲೋನ್ ಮೊತ್ತವನ್ನು ಪಡೆಯಲು ಮತ್ತು ಮರುಪಾವತಿಸಲು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಮೌಲ್ಯಮಾಪನ ಮಾಡಲು ಹಣಕಾಸು ಸಂಸ್ಥೆಗಳು ಬಳಸುವ ಪೂರ್ವನಿರ್ಧರಿತ ಮಾನದಂಡಗಳನ್ನು ಸೂಚಿಸುತ್ತದೆ.
ಬಜಾಜ್ ಹೌಸಿಂಗ್ ಫೈನಾನ್ಸ್ ನಿಮಗೆ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಪ್ರಸ್ತುತಪಡಿಸುತ್ತದೆ, ಇದು ನಿಮ್ಮ ಆದಾಯ ಮತ್ತು ಹಣಕಾಸಿನ ಆಧಾರದ ಮೇಲೆ ನೀವು ಅರ್ಹರಾಗಿರುವ ಹೋಮ್ ಲೋನ್ ಮೊತ್ತವನ್ನು ಅಳೆಯಲು ನಿಮಗೆ ಸಹಾಯ ಮಾಡುತ್ತದೆ.
ಹೋಮ್ ಲೋನ್ ಅರ್ಹತೆ ಕ್ಯಾಲ್ಕುಲೇಟರ್ ಎಂದರೇನು?
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಒಂದು ಉಚಿತ, ಆನ್ಲೈನ್ ಸಾಧನವಾಗಿದ್ದು, ಸಾಲಗಾರರು ಅರ್ಹರಾಗಿರುವ ಹೋಮ್ ಲೋನ್ ಮೊತ್ತವನ್ನು ನಿರ್ಧರಿಸಲು ಅವರಿಗೆ ಸಹಾಯ ಮಾಡುತ್ತದೆ. ನಿಮ್ಮ ನಿವಾಸದ ನಗರ, ಹುಟ್ಟಿದ ದಿನಾಂಕ, ಮಾಸಿಕ ಆದಾಯ ಮತ್ತು ಮಾಸಿಕ ಜವಾಬ್ದಾರಿಗಳ ಆಧಾರದ ಮೇಲೆ, ಇದು ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ಲೆಕ್ಕ ಹಾಕುತ್ತದೆ. ಕ್ಯಾಲ್ಕುಲೇಟರ್ ಸುಲಭವಾಗಿ ಅಕ್ಸೆಸ್ ಮಾಡಬಹುದು ಮತ್ತು ಲೋನ್ ಮೊತ್ತವನ್ನು ಮಾನ್ಯುಯಲ್ ಆಗಿ ಲೆಕ್ಕ ಹಾಕುವ ಪ್ರಯತ್ನವನ್ನು ಉಳಿಸುತ್ತದೆ.
ಹೋಮ್ ಲೋನ್ ಅರ್ಹತೆಯ ಮಾನದಂಡ
ನೀವು ಬಜಾಜ್ ಹೌಸಿಂಗ್ ಫೈನಾನ್ಸ್‌ನಿಂದ ಹೌಸಿಂಗ್ ಲೋನನ್ನು ಹುಡುಕುತ್ತಿದ್ದರೆ, ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು, ಅವುಗಳೆಂದರೆ:
ಅರ್ಹತಾ ಮಾನದಂಡಗಳು | ಪೂರೈಸಬೇಕಾದ ಅವಶ್ಯಕತೆಗಳು |
---|---|
ಉದ್ಯೋಗ ಪ್ರಕಾರ | ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರು ಹೋಮ್ ಲೋನಿಗೆ ಅಪ್ಲೈ ಮಾಡಬಹುದು |
ವಯಸ್ಸು | ಸಂಬಳ ಪಡೆಯುವವರಿಗೆ: 21 ರಿಂದ 75 ವರ್ಷಗಳವರೆಗೆ** ಸ್ವಯಂ ಉದ್ಯೋಗಿಗಳಿಗೆ: 23 ರಿಂದ 70 ವರ್ಷಗಳವರೆಗೆ** |
ವಸತಿ ಸ್ಥಿತಿ ಮತ್ತು ನಾಗರಿಕತ್ವ | ಸಂಬಳ ಪಡೆಯುವ ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು (ಎನ್ಆರ್‌ಐಗಳು ಸೇರಿದಂತೆ) ಸ್ವಯಂ ಉದ್ಯೋಗಿ ಅರ್ಜಿದಾರರು ಭಾರತೀಯರಾಗಿರಬೇಕು (ನಿವಾಸಿ ಮಾತ್ರ) |
ಕೆಲಸದ ಅನುಭವ/ಬಿಸಿನೆಸ್ ವಿಂಟೇಜ್ | ಸಂಬಳ ಪಡೆಯುವವರಿಗೆ: ಕನಿಷ್ಠ 3 ವರ್ಷಗಳ ಕೆಲಸದ ಅನುಭವ ಸ್ವಯಂ ಉದ್ಯೋಗಿಗಳಿಗೆ: ಪ್ರಸ್ತುತ ಬಿಸಿನೆಸ್‌ನಲ್ಲಿ 3 ವರ್ಷಗಳಿಗಿಂತ ಕಡಿಮೆಯಿಲ್ಲದ ಹಿನ್ನೆಲೆ |
ಹೋಮ್ ಲೋನ್‌ಗೆ ಸೂಕ್ತವಾದ ಕ್ರೆಡಿಟ್ ಸ್ಕೋರ್ | 750 ಮತ್ತು ಅದಕ್ಕಿಂತ ಹೆಚ್ಚಿನ ಸೂಕ್ತ ಕ್ರೆಡಿಟ್ ಸ್ಕೋರ್ |
**ಲೋನ್ ಮೆಚ್ಯೂರಿಟಿ ಸಮಯದಲ್ಲಿ ಅಧಿಕ ವಯಸ್ಸಿನ ಮಿತಿಯನ್ನು ವಯಸ್ಸು ಎಂದು ಪರಿಗಣಿಸಲಾಗುತ್ತದೆ. ಹೆಚ್ಚುವರಿಯಾಗಿ, ಆಸ್ತಿಯ ಪ್ರೊಫೈಲ್ ಆಧಾರದ ಮೇಲೆ ಗರಿಷ್ಠ ವಯಸ್ಸಿನ ಮಿತಿಯು ಬದಲಾಗಬಹುದು.
ಹೋಮ್ ಲೋನ್ ಅರ್ಹತಾ ಅವಶ್ಯಕತೆಗಳು ಸೂಚನಾತ್ಮಕವಾಗಿವೆ ಮತ್ತು ಹೆಚ್ಚುವರಿ ಮಾನದಂಡಗಳನ್ನು ಒಳಗೊಂಡಿರಬಹುದು ಎಂಬುದನ್ನು ಗಮನಿಸಿ.
ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಿ
ಮನೆ ಖರೀದಿಸುವುದರಿಂದ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಭದ್ರತೆ ಮತ್ತು ಸ್ಥಿರತೆಯ ಅರ್ಥವನ್ನು ಒದಗಿಸಬಹುದು. ಹೋಮ್ ಲೋನ್‌ಗಳು ವ್ಯಕ್ತಿಗಳಿಗೆ ತಮ್ಮ ಮನೆ ಮಾಲೀಕತ್ವದ ಕನಸನ್ನು ಸಾಧಿಸಲು ಸಹಾಯ ಮಾಡುತ್ತವೆ. ಈ ಮೊದಲು ಚರ್ಚಿಸಿದಂತೆ, ಆದಾಯ, ಕ್ರೆಡಿಟ್ ಇತಿಹಾಸ, ಹಣಕಾಸಿನ ಸ್ಥಿರತೆ, ವಯಸ್ಸು ಮತ್ತು ಆಸ್ತಿ ಮೌಲ್ಯದಂತಹ ಅಂಶಗಳ ಆಧಾರದ ಮೇಲೆ ಹೋಮ್ ಲೋನಿಗೆ ಅರ್ಹತೆಯನ್ನು ನಿರ್ಧರಿಸಲಾಗುತ್ತದೆ.
ನೀವು ಅರ್ಹರಾಗಬಹುದಾದ ಅಂದಾಜು ಲೋನ್ ಮೊತ್ತವನ್ನು ಅರ್ಥಮಾಡಿಕೊಳ್ಳಲು ನೀವು ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು. ಹಾಗೆ ಮಾಡುವ ಮೂಲಕ, ನೀವು ಹೆಚ್ಚು ಕೇಂದ್ರೀಕೃತವಾಗಿ ಆಸ್ತಿ ಹುಡುಕಾಟವನ್ನು ನಡೆಸಬಹುದು ಮತ್ತು ನೀವು ಹೊಂದಿಕೆಯಾಗಲು ಮಾಡಬೇಕಾದ ಡೌನ್ ಪೇಮೆಂಟನ್ನು ಅಂದಾಜು ಮಾಡಬಹುದು.
ಇದನ್ನು ಒಂದು ಉದಾಹರಣೆಯೊಂದಿಗೆ ಅರ್ಥಮಾಡಿಕೊಳ್ಳೋಣ. 30 ವರ್ಷದ ಮಿ. ಅಯ್ಯರ್ ಮಾಸಿಕ ಆದಾಯ ರೂ. 1,40,000 ನೊಂದಿಗೆ ಚೆನ್ನೈನಲ್ಲಿ ಪ್ರತಿಷ್ಠಿತ ಎಂಎನ್‌ಸಿಯಲ್ಲಿ ಕೆಲಸ ಮಾಡುವ ಉದ್ಯೋಗಿಯಾಗಿದ್ದಾರೆ. ಪ್ರತಿ ತಿಂಗಳು ಅವರ ಸಂಬಳ ಮತ್ತು ಒಟ್ಟು ಹೊಣೆಗಾರಿಕೆಗಳ ವಿಭಜಿತ ಮೊತ್ತ ಇಲ್ಲಿದೆ
ಆದಾಯದ ಮೂಲಗಳು | ಮೊತ್ತ (ರೂ. ಗಳಲ್ಲಿ) | ಹೊಣೆಗಾರಿಕೆಗಳು | ಮೊತ್ತ (ರೂ. ಗಳಲ್ಲಿ) |
---|---|---|---|
ಬೇಸಿಕ್ | 65,000 | ಆದಾಯ ತೆರಿಗೆ | 10,000 |
ಎಚ್ಆರ್‌ಎ | 22,000 | ಮಾಸಿಕ ಬಾಡಿಗೆ | 20,000 |
ಸಾಗಣೆ | 10,000 | ಇತರ ಸ್ಥಿರ ಜವಾಬ್ದಾರಿಗಳು | 20,000 |
ಎಲ್‌ಟಿಎ | 5,000 | -- | -- |
ಇತರೆ ಭತ್ಯೆಗಳು | 33,000 | -- | -- |
ವೈದ್ಯಕೀಯ ಖರ್ಚುಗಳು | 5,000 | -- | -- |
ಒಟ್ಟು ಆದಾಯ | 1,40,000 | ಒಟ್ಟು ಜವಾಬ್ದಾರಿಗಳು | 50,000 |
ಶ್ರೀ ಅಯ್ಯರ್ ಅವರ ಎಲ್ಲಾ ನಿಗದಿತ ಜವಾಬ್ದಾರಿಗಳನ್ನು ಪರಿಗಣಿಸಿ, ಹೋಮ್ ಲೋನ್ ಇಎಂಐಗಳ ಪಾವತಿಗೆ ಲಭ್ಯವಿರುವ ಅವರ ವಿಲೇವಾರಿ ಆದಾಯವು ರೂ. 90,000 (ರೂ. 1,40,000 – ರೂ. 50,000) ಆಗಿದೆ.
ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?
ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಕೆದಾರರಿಗೆ ವಿವಿಧ ಅರ್ಹತಾ ಅಂಶಗಳ ಆಧಾರದ ಮೇಲೆ ಅವರು ಪಡೆಯಬಹುದಾದ ಅಂದಾಜು ಲೋನ್ ಮೊತ್ತವನ್ನು ಮೌಲ್ಯಮಾಪನ ಮಾಡಲು ಅನುಮತಿ ನೀಡುತ್ತದೆ. ನಮ್ಮ ಲೋನ್ ಮೊತ್ತದ ಅರ್ಹತಾ ಕ್ಯಾಲ್ಕುಲೇಟರ್‌ನೊಂದಿಗೆ ಹೋಮ್ ಲೋನ್ ಅರ್ಹತೆಯನ್ನು ಪರಿಶೀಲಿಸಲು ಈ ಕೆಳಗೆ ನಮೂದಿಸಿದ ಹಂತವಾರು ಮಾರ್ಗದರ್ಶಿಯನ್ನು ಅನುಸರಿಸಿ:
- ದಿನಾಂಕ-ತಿಂಗಳು-ವರ್ಷದ ಫಾರ್ಮ್ಯಾಟಿನಲ್ಲಿ ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ.
- ಡ್ರಾಪ್‌ಡೌನ್ ಮೆನುವಿನಿಂದ ನಿಮ್ಮ ನಿವಾಸದ ನಗರವನ್ನು ಆಯ್ಕೆಮಾಡಿ. ಆಯ್ಕೆ ಮಾಡಿದ ನಗರವು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ಗೆ ನಿಮ್ಮ ಆದಾಯ ಮತ್ತು ಮನೆಯ ಮಾರುಕಟ್ಟೆ ಬೆಲೆಯ ಪ್ರಕಾರ ನಿಮ್ಮ ಲೋನ್ ಮೊತ್ತದ ಸೂಕ್ತತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.
- ನಿಮ್ಮ ಮಾಸಿಕ ಸಂಬಳ ಅಥವಾ ಆದಾಯವನ್ನು (ಗಳಿಸುವ ಯಾವುದೇ ಹೆಚ್ಚುವರಿ ಮೂಲಗಳನ್ನು ಒಳಗೊಂಡಂತೆ) ರೂಪಾಯಿಗಳಲ್ಲಿ ಸೇರಿಸಲು ನಮೂದಿಸಿ ಅಥವಾ ಸ್ಲೈಡ್ ಮಾಡಿ’.
- ಪಾವತಿಸಬೇಕಾದ ಇಎಂಐಗಳು, ಫಿಕ್ಸೆಡ್ ವೆಚ್ಚಗಳು ಮತ್ತು ಬಾಕಿ ಉಳಿದ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್‌ಗಳಂತಹ ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳನ್ನು ಒದಗಿಸಿ.
ನೀವು ಅಗತ್ಯವಿರುವ ಮೌಲ್ಯಗಳನ್ನು ನಮೂದಿಸಿದ ನಂತರ, ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನಿಮ್ಮ ಪ್ರಸ್ತುತ ಅರ್ಹತೆಯ ಪ್ರಕಾರ ನೀವು ಅನುಕೂಲಕರವಾಗಿ ಪಡೆಯಬಹುದಾದ ಲೋನ್ ಮೊತ್ತದ ನಿಖರ ಮತ್ತು ತ್ವರಿತ ಅಂದಾಜು ಒದಗಿಸುತ್ತದೆ.
ಹೌಸಿಂಗ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರುವ ಅಂಶಗಳು
ಸಾಲಗಾರರು ಮರುಪಾವತಿ ಮಾಡುವ ಸಾಮರ್ಥ್ಯ ಮತ್ತು ಸಾಲ ನೀಡುವಲ್ಲಿ ಒಳಗೊಂಡಿರುವ ಅಪಾಯವನ್ನು ನಿರ್ಧರಿಸಲು ಸಾಲದಾತರು ಬಳಸುವ ಅನೇಕ ಅಂಶಗಳ ಆಧಾರದ ಮೇಲೆ ಹೋಮ್ ಲೋನಿನ ಅರ್ಹತೆಯನ್ನು ಲೆಕ್ಕ ಹಾಕಲಾಗುತ್ತದೆ. ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ನಿರ್ಧರಿಸುವ ಮೂಲಭೂತ ಅಂಶಗಳು ನಿಮ್ಮ ಆದಾಯ ಮತ್ತು ಮರುಪಾವತಿ ಸಾಮರ್ಥ್ಯವನ್ನು ಒಳಗೊಂಡಿವೆ.
ನಿಮ್ಮ ವಯಸ್ಸು, ಹಣಕಾಸು ಮತ್ತು ಉದ್ಯೋಗ ಪ್ರೊಫೈಲ್, ನಿವಾಸದ ಸ್ಥಳ ಅಥವಾ ನಗರ, ಕ್ರೆಡಿಟ್ ಪ್ರೊಫೈಲ್, ಇದು ನಿಮ್ಮ ಸಿಬಿಲ್ ಸ್ಕೋರ್ ಮತ್ತು ಬ್ಯೂರೋ ವರದಿ, ಅಸ್ತಿತ್ವದಲ್ಲಿರುವ ಮರುಪಾವತಿ ಹೊಣೆಗಾರಿಕೆಗಳು ಇತ್ಯಾದಿಗಳನ್ನು ಒಳಗೊಂಡಿದೆ. ಈ ಅಂಶಗಳು ನಿಮ್ಮ ಬಡ್ಡಿ ದರವನ್ನು ನಿರ್ಧರಿಸಲು ಕೂಡ ಕೊಡುಗೆ ನೀಡುತ್ತವೆ, ಇದರಿಂದಾಗಿ ಕಡಿಮೆ-ಅಪಾಯದ ಪ್ರೊಫೈಲ್‌ಗಳು ಕಡಿಮೆ ಬಡ್ಡಿ ದರಗಳನ್ನು ಹಾಗೆಯೇ ಹೆಚ್ಚಿನ-ಅಪಾಯದ ಪ್ರೊಫೈಲ್‌ಗಳು ಹೆಚ್ಚಿನ ಬಡ್ಡಿ ದರಗಳನ್ನು ಆಕರ್ಷಿಸುತ್ತವೆ.
ಅಪ್ಲೈ ಮಾಡುವಾಗ ನಿಮ್ಮ ಅರ್ಹತೆಯನ್ನು ಖಚಿತಪಡಿಸಲು ಹೌಸಿಂಗ್ ಲೋನಿಗೆ ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಒದಗಿಸಿ. ಹೋಮ್ ಲೋನ್ ಮೊತ್ತ ಮತ್ತು ವಿಧಿಸಲಾದ ಬಡ್ಡಿಯ ಮೇಲೆ ವಿವಿಧ ಅರ್ಹತಾ ಅಂಶಗಳ ಪರಿಣಾಮಗಳ ವಿವರಣೆ ಇಲ್ಲಿದೆ:
- ಆದಾಯ ಮತ್ತು ಉದ್ಯೋಗ ಪ್ರೊಫೈಲ್: ಹೆಚ್ಚಿನ ಮಾಸಿಕ/ವಾರ್ಷಿಕ ಆದಾಯವು ಹೋಮ್ ಲೋನನ್ನು ಮರುಪಾವತಿಸಲು ಹೆಚ್ಚಿನ ಸಾಮರ್ಥ್ಯವನ್ನು ಸೂಚಿಸುತ್ತದೆ. ಹೆಚ್ಚಿನ ಆದಾಯವು ಡೀಫಾಲ್ಟ್‌ನ ಕಡಿಮೆ ಅಪಾಯವನ್ನು ಕೂಡ ಸೂಚಿಸುತ್ತದೆ. ಅದೇ ರೀತಿ, ಸಾಲಗಾರರ ಉದ್ಯೋಗ ಪ್ರೊಫೈಲ್ ಕೂಡ ಅವರ ಅರ್ಹತೆಯ ಮೇಲೆ ಪರಿಣಾಮ ಬೀರುತ್ತದೆ. ಮಾನ್ಯತೆ ಪಡೆದ ಕಂಪನಿಯೊಂದಿಗೆ ಕೆಲಸ ಮಾಡುವ ಸಂಬಳದ ಉದ್ಯೋಗಿಯು ಸ್ಪರ್ಧಾತ್ಮಕ ದರಗಳಲ್ಲಿ ಗಣನೀಯ ಲೋನನ್ನು ಪಡೆಯುವ ಉತ್ತಮ ಅವಕಾಶವನ್ನು ಹೊಂದಿರುತ್ತಾರೆ. ಸ್ಥಾಪಿತ ಬಿಸಿನೆಸ್ ಪ್ರೊಫೈಲ್‌ಗಳನ್ನು ಹೊಂದಿರುವ ಸ್ವಯಂ ಉದ್ಯೋಗಿಗಳು ಸರಿಯಾದ ಪ್ರೊಫೈಲ್‌ನೊಂದಿಗೆ ಅಗತ್ಯವಿರುವ ಲೋನ್ ಮೊತ್ತಕ್ಕೆ ಕೂಡ ಸಮಾಲೋಚನೆ ಮಾಡಬಹುದು.
- ವಯಸ್ಸು: ಸಾಲಗಾರರು ಗಣನೀಯ ಹೋಮ್ ಲೋನ್ ಪಡೆಯುವ ಉತ್ತಮ ಅವಕಾಶವನ್ನು ಹೊಂದಿದ್ದಾರೆ, ಇದನ್ನು ದೀರ್ಘ ಅವಧಿಯಲ್ಲಿ ಮರುಪಾವತಿಸಬಹುದು. ನಿವೃತ್ತಿ ವಯಸ್ಸಿನ ಹತ್ತಿರದಲ್ಲಿರುವ ವ್ಯಕ್ತಿಗಳು ಕಡಿಮೆ ಮರುಪಾವತಿ ಅವಧಿಗೆ ಹೋಮ್ ಲೋನನ್ನು ಕೂಡ ಪಡೆಯಬಹುದು.
- ಕ್ರೆಡಿಟ್ ಪ್ರೊಫೈಲ್: ಸಾಲಗಾರರ ಕ್ರೆಡಿಟ್ ಪ್ರೊಫೈಲ್ ಅವರ ಮರುಪಾವತಿ ಇತಿಹಾಸ, ಸಾಲ ಮರುಪಾವತಿ, ಕ್ರೆಡಿಟ್ ಬಳಕೆ, ಸಾಲದಿಂದ-ಆದಾಯದ ಅನುಪಾತ ಮತ್ತು ಕ್ರೆಡಿಟ್ ಮಿಕ್ಸ್ ಮುಂತಾದ ಕ್ರೆಡಿಟ್ ಅಭ್ಯಾಸಗಳನ್ನು ಒಳಗೊಂಡಂತೆ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ. ಕ್ರೆಡಿಟ್ ಸ್ಕೋರ್ ಮತ್ತು ರಿಪೋರ್ಟ್ ಸಂಖ್ಯಾತ್ಮಕವಾಗಿ ಈ ಮಾನದಂಡಗಳನ್ನು ಒಟ್ಟುಗೂಡಿಸಿ, ಹೆಚ್ಚಿನ ಸ್ಕೋರ್‌ನೊಂದಿಗೆ ವಿಶ್ವಾಸಾರ್ಹ ಕ್ರೆಡಿಟ್ ರಿಪೋರ್ಟ್ ಮತ್ತು ಕ್ರೆಡಿಟ್ ಅರ್ಹ ಪ್ರೊಫೈಲ್ ಸೂಚಿಸುತ್ತದೆ.
ನಿಮ್ಮ ಸಂಬಳದ ಆಧಾರದ ಮೇಲೆ ನೀವು ಯಾವ ಹೋಮ್ ಲೋನ್ ಮೊತ್ತವನ್ನು ಪಡೆಯಬಹುದು?
ಹೋಮ್ ಲೋನ್ ಅರ್ಹತೆಯು ಅರ್ಜಿದಾರರ ವಯಸ್ಸು ಮತ್ತು ಆದಾಯಕ್ಕೆ ಭಿನ್ನವಾಗಿರುತ್ತದೆ. ಸಂಬಳ ಪಡೆಯುವ ವ್ಯಕ್ತಿಗಳಿಗೆ, ಅವರ ನಿವ್ವಳ ಮಾಸಿಕ ಆದಾಯವು ಅವರ ಗರಿಷ್ಠ ಲೋನ್ ಅರ್ಹತೆಯನ್ನು ನಿರ್ಧರಿಸುತ್ತದೆ. ಭೋಪಾಲ್‌ನಲ್ಲಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ತಮ್ಮ ಮಾಸಿಕ ಆದಾಯದ ಬದಲಾವಣೆಗಳ ಪ್ರಕಾರ ಅಂದಾಜು ಹೌಸಿಂಗ್ ಲೋನ್ ಅರ್ಹತೆಯನ್ನು ಕೆಳಗೆ ನೀಡಲಾಗಿದೆ.
ಹೊಸ ಮಾಸಿಕ ಆದಾಯ (ರೂ.) | ಗರಿಷ್ಠ ಹೋಮ್ ಲೋನ್ ಅರ್ಹತೆ (ರೂ.) |
---|---|
25,000 | 18,69,000 |
35,000 | 26,16,000 |
45,000 | 33,64,000 |
55,000 | 41,11,000 |
65,000 | 48,59,000 |
75,000 | 56,06,000 |
*ಹಿಂದಿನ ಟೇಬಲ್‌ನಲ್ಲಿನ ಮೌಲ್ಯಗಳು ವಿವರಣಾತ್ಮಕ ಉದ್ದೇಶಗಳಿಗಾಗಿ ಮಾತ್ರ. ವ್ಯಕ್ತಿಯ ಪ್ರೊಫೈಲ್ ಮತ್ತು ಲೋನ್ ಅವಶ್ಯಕತೆಗಳ ಆಧಾರದ ಮೇಲೆ ನಿಜವಾದ ಮೌಲ್ಯಗಳು ಬದಲಾಗಬಹುದು.
ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸಲು ಸಲಹೆಗಳು
ಅರ್ಜಿದಾರರು ಅಪ್ಲೈ ಮಾಡುವ ಮೊದಲು ತಮ್ಮ ಅರ್ಹತೆಯನ್ನು ಪರಿಶೀಲಿಸಬೇಕು ಮತ್ತು ಸುಲಭವಾದ ಲೋನ್ ಅನುಮೋದನೆಗಾಗಿ ತಮ್ಮ ಪ್ರೊಫೈಲನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ತ್ವರಿತ ಲೋನ್ ಅನುಮೋದನೆಯ ಅವಕಾಶಗಳನ್ನು ಸುಧಾರಿಸಲು ಈ ಕೆಳಗಿನ ಸಲಹೆಗಳು ಸಹಾಯ ಮಾಡುತ್ತವೆ.
ಹಣಕಾಸಿನ ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಿ
ಹಣಕಾಸಿನ ಸಹ-ಅರ್ಜಿದಾರರನ್ನು ಹೊಂದಿರುವ ಹೋಮ್ ಲೋನ್ ಎರಡೂ ಅರ್ಜಿದಾರರ ಸಂಯೋಜಿತ ಅರ್ಹತೆಯನ್ನು ಪ್ರತಿನಿಧಿಸುತ್ತದೆ. ಸುಧಾರಿತ ಅರ್ಹತೆಗಾಗಿ ಹೆಚ್ಚಿನ ಆದಾಯ, ವಿಶ್ವಾಸಾರ್ಹ ಕ್ರೆಡಿಟ್ ಸ್ಕೋರ್ ಮತ್ತು ಸ್ವಚ್ಛ ಮರುಪಾವತಿ ಇತಿಹಾಸದೊಂದಿಗೆ ಸಹ-ಅರ್ಜಿದಾರರನ್ನು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಸಹ-ಸಾಲಗಾರರೊಂದಿಗೆ ಅಪ್ಲೈ ಮಾಡುವಾಗ ಲಭ್ಯವಿರುವ ಗರಿಷ್ಠ ಲೋನ್ ಮೊತ್ತವನ್ನು ಮೌಲ್ಯಮಾಪನ ಮಾಡಲು ಅರ್ಜಿದಾರರು ನಮ್ಮ ಉಚಿತ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ಆನ್ಲೈನಿನಲ್ಲಿ ಬಳಸಲು ನಾವು ಶಿಫಾರಸು ಮಾಡುತ್ತೇವೆ. ಹೋಮ್ ಲೋನ್ ಸಹ-ಸಾಲ ಪಡೆಯುವುದು ಎರಡೂ ಸಾಲಗಾರರಿಗೆ ವೈಯಕ್ತಿಕ ತೆರಿಗೆ ಪ್ರಯೋಜನಗಳೊಂದಿಗೆ ಬರುತ್ತದೆ.
ವಿಸ್ತರಿತ ಲೋನ್ ಅವಧಿಯನ್ನು ಆಯ್ಕೆಮಾಡಿ
ನಿಮ್ಮ ಅರ್ಹತೆಯನ್ನು ಸುಧಾರಿಸಲು ಹೋಮ್ ಲೋನ್ ಮರುಪಾವತಿಗಾಗಿ ವಿಸ್ತರಿತ ಅವಧಿಯನ್ನು ಆಯ್ಕೆಮಾಡಿ. ದೀರ್ಘ ಅವಧಿಯು ಒಟ್ಟು ಮರುಪಾವತಿ ಹೊಣೆಗಾರಿಕೆಯನ್ನು ಹೆಚ್ಚಿನ ಸಂಖ್ಯೆಯ ತಿಂಗಳಾಗಿ ವಿಂಗಡಿಸುತ್ತದೆ ಮತ್ತು ಇಎಂಐ ಗಳನ್ನು ಕಡಿಮೆ ಮಾಡುತ್ತದೆ.
ಸೀಮಿತ ಆದಾಯ ಹೊಂದಿರುವ ವ್ಯಕ್ತಿಗಳು ದೀರ್ಘ ಅವಧಿ ಮತ್ತು ಸಣ್ಣ ಇಎಂಐಗಳನ್ನು ಆಯ್ಕೆ ಮಾಡುವ ಮೂಲಕ ತಮ್ಮ ಮರುಪಾವತಿ ಸಾಧ್ಯತೆ ಮತ್ತು ಒಟ್ಟಾರೆ ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸಬಹುದು. ನಿಮ್ಮ ಆದಾಯದ ಪ್ರಕಾರ ಸೂಕ್ತ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಲು ಆನ್ಲೈನ್ ಹೌಸಿಂಗ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಬಳಸಿ.
ಅಸ್ತಿತ್ವದಲ್ಲಿರುವ ಸಾಲಗಳನ್ನು ಮರುಪಾವತಿಸಿ
ಅಸ್ತಿತ್ವದಲ್ಲಿರುವ ಲೋನ್‌ಗಳ ಮರುಪಾವತಿಯು ನಿಮ್ಮ ಹೋಮ್ ಲೋನ್ ಅನುಮೋದನೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಏಕೆಂದರೆ ಸಾಲಗಳನ್ನು ಪಾವತಿಸುವುದರಿಂದ ನಿಮ್ಮ ಒಟ್ಟು ಹೊಣೆಗಾರಿಕೆಯನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಮರುಪಾವತಿ ಮಾಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ವಾಹನ ಅಥವಾ ಪರ್ಸನಲ್ ಲೋನ್‌ಗಳ ಮೇಲೆ ಯಾವುದೇ ಬಾಕಿ ಉಳಿಕೆಯನ್ನು ಮರುಪಾವತಿಸುವುದು ಹೋಮ್ ಲೋನ್ ಅರ್ಹತೆಯನ್ನು ಸುಧಾರಿಸುತ್ತದೆ. ಹೆಚ್ಚಿನ ಮರುಪಾವತಿ ಸಾಮರ್ಥ್ಯವನ್ನು ಖಚಿತಪಡಿಸಲು ಅರ್ಹತಾ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಿ.
ಆದಾಯದ ಎಲ್ಲಾ ಮೂಲಗಳನ್ನು ಡಾಕ್ಯುಮೆಂಟ್ ಮಾಡಿ
ಹಣಕಾಸಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವಾಗ, ಆದಾಯದ ಎಲ್ಲಾ ಮೂಲಗಳಾದ ಸಂಬಳ (ಸಂಬಳದ ಅರ್ಜಿದಾರರಾಗಿದ್ದರೆ), ಬಿಸಿನೆಸ್ ಲಾಭಗಳು (ಸ್ವಯಂ ಉದ್ಯೋಗಿಯಾಗಿದ್ದರೆ), ಮಾಸಿಕ ಬಾಡಿಗೆ ಗಳಿಕೆ ಮತ್ತು ಹೂಡಿಕೆಗಳಿಂದ ಆದಾಯ, ಮತ್ತು ನಿಮ್ಮ ಹೋಮ್ ಲೋನ್ ಅರ್ಹತಾ ಮೊತ್ತವನ್ನು ಸುಧಾರಿಸಲು ಇತರವುಗಳನ್ನು ಒಳಗೊಂಡಿರುತ್ತದೆ.
ಕ್ರೆಡಿಟ್ ಸ್ಕೋರ್ ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಿ
ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಒಟ್ಟಾರೆ ಕ್ರೆಡಿಟ್ ಪ್ರೊಫೈಲ್ ಅನ್ನು ಕೂಡ ವಿಸ್ತರಿಸುತ್ತದೆ ಮತ್ತು ಹಾಗಾಗಿ, ಹೋಮ್ ಲೋನ್ ಅರ್ಹತೆಯನ್ನು ಹೆಚ್ಚಿಸುತ್ತದೆ. ಸಾಲಗಳನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡುವುದು ಮತ್ತು ಕ್ರೆಡಿಟ್ ಬಳಕೆಯನ್ನು ಮಿತಿಗೊಳಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರನ್ನು ಸುಧಾರಿಸಲು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಆದಾಯ ಡಾಕ್ಯುಮೆಂಟ್‌ಗಳಲ್ಲಿ ಯಾವುದೇ ವೇರಿಯಬಲ್ ವಾರ್ಷಿಕ ಪಾವತಿಯನ್ನು ಸೇರಿಸಿ
ಹೋಮ್ ಲೋನ್ ಡಾಕ್ಯುಮೆಂಟ್‌ಗಳನ್ನು ಒದಗಿಸುವಾಗ, ನಿಮ್ಮ ಒಟ್ಟಾರೆ ಲೋನ್ ಅರ್ಹತೆಯನ್ನು ಪ್ರಯತ್ನಿಸಲು ಮತ್ತು ಹೆಚ್ಚಿಸಲು ವಾರ್ಷಿಕ ಬೋನಸ್‌ಗಳು ಮತ್ತು ಪ್ರೋತ್ಸಾಹಕಗಳಂತಹ ವಾರ್ಷಿಕವಾಗಿ ಪಡೆದ ಯಾವುದೇ ವೇರಿಯಬಲ್ ಪಾವತಿಯನ್ನು ಒಳಗೊಂಡಿದೆ. ಹೋಮ್ ಲೋನ್ ಮೊತ್ತಕ್ಕೆ ನಿಮ್ಮ ನಿಜವಾದ ಅರ್ಹತೆಯನ್ನು ನಿರ್ಧರಿಸಲು ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್‌ನಲ್ಲಿ ಆದಾಯ ಮೌಲ್ಯವನ್ನು ನಮೂದಿಸುವಾಗ ಮೊತ್ತವನ್ನು ಸೇರಿಸಿ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಹಕ್ಕುತ್ಯಾಗ
ಈ ಕ್ಯಾಲ್ಕುಲೇಟರನ್ನು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಒದಗಿಸಲಾಗುತ್ತದೆ ಮತ್ತು ಹಣಕಾಸಿನ ಸಲಹೆ ಎಂದು ಪರಿಗಣಿಸಬಾರದು. ಕ್ಯಾಲ್ಕುಲೇಟರ್‌ನಿಂದ ಪಡೆದ ಫಲಿತಾಂಶಗಳು ನಿಮ್ಮ ಇನ್ಪುಟ್‌ಗಳ ಆಧಾರದ ಮೇಲೆ ಅಂದಾಜು ಆಗಿರುತ್ತವೆ ಮತ್ತು ಯಾವುದೇ ಲೋನಿನ ನಿಜವಾದ ನಿಯಮ ಅಥವಾ ಷರತ್ತುಗಳನ್ನು ತೋರಿಸದಿರಬಹುದು. ಕ್ಯಾಲ್ಕುಲೇಟರ್‌ನ ನಿಖರತೆಯನ್ನು ಪರಿಶೀಲಿಸಲು ಬಳಕೆದಾರರು ಜವಾಬ್ದಾರರಾಗಿರುತ್ತಾರೆ. ನಿರ್ದಿಷ್ಟ ಲೋನ್ ಪ್ರಾಡಕ್ಟ್‌ಗಳು, ಬಡ್ಡಿ ದರಗಳು, ವೈಯಕ್ತಿಕ ಹಣಕಾಸಿನ ಸಂದರ್ಭಗಳು ಮತ್ತು ಬಜಾಜ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ('ಬಿಎಚ್‌ಎಫ್‌ಎಲ್') ನಿರ್ದಿಷ್ಟ ಮಾನದಂಡಗಳ ಆಧಾರದ ಮೇಲೆ ನಿಜವಾದ ಲೋನ್ ಅಂಕಿಅಂಶಗಳು ಬದಲಾಗಬಹುದು.
ಬಳಕೆದಾರರು ತಮ್ಮ ನಿರ್ದಿಷ್ಟ ಲೋನ್ ಅಗತ್ಯಗಳಿಗೆ ಸಂಬಂಧಿಸಿದಂತೆ ನಿಖರ ಮತ್ತು ವೈಯಕ್ತಿಕಗೊಳಿಸಿದ ಸಲಹೆಯನ್ನು ಪಡೆಯಲು ಅರ್ಹ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸಲು ಸಲಹೆ ನೀಡಲಾಗುತ್ತದೆ. ಈ ಕ್ಯಾಲ್ಕುಲೇಟರ್‌ನ ಬಳಕೆ ಮತ್ತು ಫಲಿತಾಂಶಗಳು ಲೋನಿಗೆ ಅನುಮೋದನೆಯನ್ನು ಖಾತರಿಪಡಿಸುವುದಿಲ್ಲ. ಲೋನ್‌ಗಳ ಮಂಜೂರಾತಿ ಮತ್ತು ವಿತರಣೆ ಬಿಎಚ್ಎಫ್ಎಲ್‌ನ ಸ್ವಂತ ವಿವೇಚನೆಗೆ ಒಳಪಟ್ಟಿವೆ. ಲೋನ್ ಪಡೆಯುವಾಗ ವಿಧಿಸಲಾಗುವ ಸಂಭಾವ್ಯ ಫೀಸ್ ಅಥವಾ ಶುಲ್ಕಗಳನ್ನು ಕ್ಯಾಲ್ಕುಲೇಟರ್ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಬಳಕೆದಾರರು ಯಾವುದೇ ಲೋನ್ ಒಪ್ಪಂದದ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ಈ ಕ್ಯಾಲ್ಕುಲೇಟರ್ ಬಳಸುವ ಮೂಲಕ, ಮೇಲೆ ತಿಳಿಸಿದ ಮಾಹಿತಿಯ ಮೇಲೆ ಅವಲಂಬನೆ ಮಾಡುವುದು ಯಾವಾಗಲೂ ಬಳಕೆದಾರರ ಏಕೈಕ ಜವಾಬ್ದಾರಿ ಮತ್ತು ನಿರ್ಧಾರವಾಗಿರುತ್ತದೆ ಎಂದು ಬಳಕೆದಾರರು ಒಪ್ಪುತ್ತಾರೆ ಮತ್ತು ಈ ಮಾಹಿತಿಯ ಯಾವುದೇ ಬಳಕೆಯ ಸಂಪೂರ್ಣ ಅಪಾಯವನ್ನು ಬಳಕೆದಾರರು ಊಹಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಬಿಎಚ್‌ಎಫ್‌ಎಲ್ ಅಥವಾ ಬಜಾಜ್ ಗ್ರೂಪ್, ಅದರ ಉದ್ಯೋಗಿಗಳು, ನಿರ್ದೇಶಕರು ಅಥವಾ ಅದರ ಏಜೆಂಟ್‌ಗಳು ಅಥವಾ ಈ ವೆಬ್‌ಸೈಟ್ ರಚಿಸುವುದು, ಉತ್ಪಾದಿಸುವುದು ಅಥವಾ ಡೆಲಿವರಿ ಮಾಡುವುದರಲ್ಲಿ ಒಳಗೊಂಡಿರುವ ಯಾವುದೇ ಇತರ ಪಾರ್ಟಿಗಳು ಯಾವುದೇ ನೇರ, ಪರೋಕ್ಷ, ಶಿಕ್ಷಾತ್ಮಕ, ಪ್ರಾಸಂಗಿಕ, ವಿಶೇಷ, ಪರಿಣಾಮಕಾರಿ ಹಾನಿಗಳಿಗೆ (ಕಳೆದುಹೋದ ಆದಾಯ ಅಥವಾ ಲಾಭಗಳು, ಬಿಸಿನೆಸ್ ನಷ್ಟ ಅಥವಾ ಡೇಟಾ ನಷ್ಟ ಸೇರಿದಂತೆ) ಅಥವಾ ಮೇಲೆ ತಿಳಿಸಿದ ಮಾಹಿತಿಯ ಮೇಲೆ ಬಳಕೆದಾರರ ಅವಲಂಬನೆಗೆ ಸಂಬಂಧಿಸಿದ ಯಾವುದೇ ಹಾನಿಗಳಿಗೆ ಹೊಣೆಗಾರರಾಗಿರುವುದಿಲ್ಲ.
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಎಫ್ಎಕ್ಯೂಗಳು
ನಿಮ್ಮ ಸಂಬಳವನ್ನು ಅವಲಂಬಿಸಿ, ಹೌಸಿಂಗ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ನಿಮ್ಮ ಹೋಮ್ ಲೋನ್ ಅರ್ಹತೆಯನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ಬಳಸಬಹುದು. ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಅನ್ನು ನೀವು ಹೇಗೆ ಬಳಸಬಹುದು ಎಂಬುದು ಇಲ್ಲಿದೆ:
-
ಡ್ರಾಪ್-ಡೌನ್ ಮೆನುವಿನಿಂದ, ನಿಮ್ಮ ನಿವಾಸದ ನಗರವನ್ನು ಆಯ್ಕೆಮಾಡಿ.
-
ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ.
-
ನಿಮ್ಮ ಮಾಸಿಕ ಆದಾಯವನ್ನು ನಮೂದಿಸಿ.
-
ನಿಮ್ಮ ಅಸ್ತಿತ್ವದಲ್ಲಿರುವ ಹಣಕಾಸಿನ ಜವಾಬ್ದಾರಿಗಳನ್ನು ನಮೂದಿಸಿ.
ನೀವು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ನೀವು ಅರ್ಹರಾಗಿರುವ ಹೋಮ್ ಲೋನ್ ಮೊತ್ತವನ್ನು ಸ್ಕ್ರೀನಿನಲ್ಲಿ ತೋರಿಸಲಾಗುತ್ತದೆ.
ಹೋಮ್ ಲೋನಿಗೆ ಅಗತ್ಯವಿರುವ ಕನಿಷ್ಠ ಸಂಬಳ ರೂ. 30,000, ಮಾಸಿಕವಾಗಿ ಗಳಿಸಬೇಕು. ಉತ್ತಮ ಹೋಮ್ ಲೋನ್ ಡೀಲ್ ಪಡೆಯುವ ಸಾಧ್ಯತೆಗಳನ್ನು ವೃದ್ಧಿಸಲು ನಿಮ್ಮ ಮಾಸಿಕ ಆದಾಯವನ್ನು ಘೋಷಿಸುವಾಗ ನಿಮ್ಮ ಎಲ್ಲಾ ಆದಾಯ ಮೂಲಗಳನ್ನು ನೀವು ಲೆಕ್ಕ ಹಾಕುವುದನ್ನು ಖಚಿತಪಡಿಸಿಕೊಳ್ಳಿ.
ಹೋಮ್ ಲೋನಿಗೆ ಅಪ್ಲೈ ಮಾಡುವಾಗ, ಯುವ ಅರ್ಜಿದಾರರು ತಮ್ಮ ಸಂಬಳದ ಗಳಿಕೆಯ ವರ್ಷಗಳು ಮತ್ತು ಮರುಪಾವತಿ ಸಾಮರ್ಥ್ಯವನ್ನು ಪರಿಗಣಿಸಿ ದೀರ್ಘ ಮರುಪಾವತಿ ಅವಧಿಯ ಪ್ರಯೋಜನವನ್ನು ಆನಂದಿಸಬಹುದು. ಹಳೆಯ ಅರ್ಜಿದಾರರು ಸಹ ಅರ್ಜಿ ಸಲ್ಲಿಸಬಹುದು, ಆದರೆ ಅವರಿಗೆ ಹೆಚ್ಚಿನ ದರಗಳನ್ನು ಆಫರ್ ಮಾಡಬಹುದು.
ರೂ. 50,000 ಸಂಬಳದ ಮೇಲೆ ನೀವು ಪಡೆಯಬಹುದಾದ ಹೋಮ್ ಲೋನನ್ನು ಸ್ಥಾಪಿಸಲು ನೀವು ಬಜಾಜ್ ಹೌಸಿಂಗ್ ಫೈನಾನ್ಸ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು.
ಇದನ್ನು ಉದಾಹರಣೆಯಾಗಿ ಪರಿಗಣಿಸಿ: ಪುಣೆಯಲ್ಲಿ ವಾಸಿಸುತ್ತಿರುವ ಅರ್ಜಿದಾರರು, ಅಸ್ತಿತ್ವದಲ್ಲಿರುವ ಯಾವುದೇ ಹಣಕಾಸಿನ ಜವಾಬ್ದಾರಿಗಳಿಲ್ಲದೆ ರೂ. 50,000 ಮಾಸಿಕ ಆದಾಯ ಹೊಂದಿರುವ 27 ವರ್ಷಗಳ ಅರ್ಹ ವಯಸ್ಸಿನವರು, ಕ್ಯಾಲ್ಕುಲೇಟರ್ ಪ್ರಕಾರ ರೂ. 39,01,609 ಹೋಮ್ ಲೋನನ್ನು ಪಡೆಯಬಹುದು.
ಅರ್ಜಿದಾರರು ಲೋನನ್ನು ಮರುಪಾವತಿಸಲು ಸಾಧ್ಯವಾಗುತ್ತಿದೆಯೇ ಅಥವಾ ಇಲ್ಲವೇ ಎಂದು ಖಚಿತಪಡಿಸಿಕೊಳ್ಳಲು ಹಣಕಾಸು ಸಂಸ್ಥೆಗಳು ಲೋನನ್ನು ನೀಡುವ ಮೊದಲು ಹಿನ್ನೆಲೆ ಪರಿಶೀಲನೆಯನ್ನು ನಡೆಸುತ್ತವೆ. ಸಾಲಗಾರರು ಲೋನನ್ನು ಮರುಪಾವತಿ ಮಾಡಬಹುದಾದರೆ ಅವರು ಮಂಜೂರು ಮಾಡಬೇಕಾದ ಲೋನ್ ಮೊತ್ತವನ್ನು ಕೂಡ ನಿರ್ಧರಿಸುತ್ತಾರೆ. ಲೋನಿಗೆ ಸಾಲಗಾರರ ಅರ್ಹತೆಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಅವರ ಕ್ರೆಡಿಟ್ ಅರ್ಹತೆಯನ್ನು ನಿರ್ಧರಿಸುವುದು ಎಂದು ಕರೆಯಲಾಗುತ್ತದೆ.
ಈ ಕೆಳಗಿನ ಅಂಶಗಳು ನಿಮ್ಮ ಹೋಮ್ ಲೋನ್ ಅರ್ಹತೆಯ ಮೇಲೆ ಪರಿಣಾಮ ಬೀರಬಹುದು:
ಆದಾಯ ಮತ್ತು ಉದ್ಯೋಗ ಪ್ರೊಫೈಲ್: ಹೆಚ್ಚಿನ ಮಾಸಿಕ ಆದಾಯವನ್ನು ಹೊಂದಿರುವುದರಿಂದ ಹೋಮ್ ಲೋನನ್ನು ಮರುಪಾವತಿಸುವ ಸುಧಾರಿತ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಮತ್ತು ಡೀಫಾಲ್ಟ್ ಅಪಾಯವನ್ನು ಕಡಿಮೆ ಮಾಡುತ್ತದೆ. ಹೆಚ್ಚುವರಿಯಾಗಿ, ಉದ್ಯೋಗದ ಸ್ಥಿತಿ, ಪ್ರತಿಷ್ಠಿತ ಕಂಪನಿಯಲ್ಲಿ ಸಂಬಳ ಪಡೆಯುವ ಕೆಲಸಗಾರರಾಗಿರಲಿ ಅಥವಾ ಉತ್ತಮವಾಗಿ ಸ್ಥಾಪಿತ ಬಿಸಿನೆಸ್ ಇತಿಹಾಸ ಹೊಂದಿರುವ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿರಲಿ, ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಹೋಮ್ ಲೋನಿಗೆ ಅರ್ಹತೆಯನ್ನು ನಿರ್ಧರಿಸುವಲ್ಲಿ ಗಮನಾರ್ಹವಾಗಿದೆ.
ವಯಸ್ಸು: ಯುವ ಸಾಲಗಾರರು ಅವರ ಮರುಪಾವತಿ ಸಾಮರ್ಥ್ಯಕ್ಕೆ ಅನುಗುಣವಾಗಿ ನೀಡಿದ ದೀರ್ಘ ಮರುಪಾವತಿ ಅವಧಿಯೊಂದಿಗೆ ಗಣನೀಯ ಹೋಮ್ ಲೋನ್ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ನಿವೃತ್ತಿ ವಯಸ್ಸಿನ ಹತ್ತಿರದ ಸಾಲಗಾರರು ಕೂಡ ಸಾಮಾನ್ಯವಾಗಿ ಕಡಿಮೆ ಮರುಪಾವತಿ ಅವಧಿಯೊಂದಿಗೆ ಹೋಮ್ ಲೋನನ್ನು ಪಡೆಯಬಹುದು.
ಕ್ರೆಡಿಟ್ ಪ್ರೊಫೈಲ್: ಸಾಲಗಾರರ ಕ್ರೆಡಿಟ್ ಪ್ರೊಫೈಲ್ ಅವರ ಮರುಪಾವತಿ ಇತಿಹಾಸ ಮತ್ತು ಕ್ರೆಡಿಟ್ ಅಭ್ಯಾಸಗಳನ್ನು (ಡೆಟ್ ಮರುಪಾವತಿ, ಕ್ರೆಡಿಟ್ ಬಳಕೆ, ಡೆಟ್-ಟು-ಇನ್ಕಮ್ ಅನುಪಾತ ಮತ್ತು ಕ್ರೆಡಿಟ್ ಮಿಕ್ಸ್) ಒಳಗೊಂಡಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಕ್ರೆಡಿಟ್ ಸ್ಕೋರ್ ಮತ್ತು ವರದಿಯು ಈ ಮಾನದಂಡಗಳನ್ನು ಸಂಖ್ಯಾತ್ಮಕವಾಗಿ ವಿವರಿಸುತ್ತದೆ, ಹೆಚ್ಚಿನ ಸ್ಕೋರ್ ಕ್ರೆಡಿಟ್ ಅರ್ಹ ಪ್ರೊಫೈಲ್ ಅನ್ನು ಸೂಚಿಸುತ್ತದೆ.
ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ನೀವು ಅರ್ಹರಾಗಿರುವ ಲೋನ್ ಮೊತ್ತವನ್ನು ಲೆಕ್ಕ ಹಾಕಲು ಗಣಿತದ ಸೂತ್ರವನ್ನು ಬಳಸುತ್ತದೆ. ಕ್ಯಾಲ್ಕುಲೇಟರ್ ನೀವು ಪಡೆಯಬಹುದಾದ ಲೋನ್ ಮೊತ್ತವನ್ನು ತೋರಿಸಲು ನಗರ, ಹುಟ್ಟಿದ ದಿನಾಂಕ, ಮಾಸಿಕ ಆದಾಯ ಮತ್ತು ಮಾಸಿಕ ಜವಾಬ್ದಾರಿಗಳಂತಹ ಮಾಹಿತಿಯನ್ನು ಬಳಸುತ್ತದೆ.
ಸಂಬಂಧಿತ ಲೇಖನಗಳು
ನಿಮ್ಮ ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ
342 3 ನಿಮಿಷ
ಹೋಮ್ ಲೋನ್ ಶುಲ್ಕಗಳ ವಿಧಗಳು
392 3 ನಿಮಿಷ
ಭಾರತದಲ್ಲಿ ಲಭ್ಯವಿರುವ ಲೋನ್‌ಗಳ ವಿಧಗಳು
378 2 ನಿಮಿಷ