ಹೋಮ್ ಲೋನ್ ಎಫ್ಎಕ್ಯೂಗಳು
ಬಜಾಜ್ ಹೌಸಿಂಗ್ ಫೈನಾನ್ಸ್ ಬಲವಾದ ಕ್ರೆಡಿಟ್ ಪ್ರೊಫೈಲ್‌ಗಳನ್ನು ಹೊಂದಿರುವ ಅರ್ಜಿದಾರರಿಗೆ ಆಕರ್ಷಕ ಹೋಮ್ ಲೋನ್ ನಿಯಮಗಳು ಮತ್ತು ಪ್ರಯೋಜನಗಳನ್ನು ಒದಗಿಸುತ್ತದೆ. ಅಂತಹ ನಿಯಮಗಳಿಗೆ ಅರ್ಹರಾಗಲು, ಅರ್ಜಿದಾರರು ಸಾಮಾನ್ಯವಾಗಿ 750+ ಸಿಬಿಲ್ ಸ್ಕೋರ್ ಹೊಂದಿರಬೇಕು.
ಹೋಮ್ ಲೋನ್ ಇಎಂಐ ಮೊತ್ತವು ಮೂರು ಪ್ರಮುಖ ಅಂಶಗಳನ್ನು ಅವಲಂಬಿಸಿರುತ್ತದೆ:
-
ಹೋಮ್ ಲೋನ್ ಅಸಲು ಮೊತ್ತ: ಇದು ಹೋಮ್ ಲೋನ್ ಮಂಜೂರಾತಿ ಮೊತ್ತವಾಗಿದೆ ಮತ್ತು ನಿಮ್ಮ ಹೋಮ್ ಲೋನ್ ಇಎಂಐ ಮೇಲೆ ನೇರ ಪರಿಣಾಮ ಬೀರುತ್ತದೆ. ನಿಮ್ಮ ಹೋಮ್ ಲೋನ್ ಮೊತ್ತವು ಹೆಚ್ಚಾದಷ್ಟೂ, ನಿಮ್ಮ ಹೋಮ್ ಲೋನ್ ಇಎಂಐ ದೊಡ್ಡದಾಗಿರುತ್ತದೆ.
-
ಹೋಮ್ ಲೋನ್ ಬಡ್ಡಿ ದರ: ಹೋಮ್ ಲೋನ್ ಬಡ್ಡಿ ದರ ಎಂದರೆ ನೀವು ಅಸಲು ಮೊತ್ತವನ್ನು ಮರುಪಾವತಿಸಬೇಕಾದ ದರವಾಗಿದೆ. ಸ್ವಾಭಾವಿಕವಾಗಿ, ಹೆಚ್ಚಿನ ಬಡ್ಡಿ ದರವು ಹೆಚ್ಚಿನ ಇಎಂಐ ಮೊತ್ತಕ್ಕೆ ಕಾರಣವಾಗುತ್ತದೆ. ಬಜಾಜ್ ಹೌಸಿಂಗ್ ಫೈನಾನ್ಸ್ ಸಾಲಗಾರರಿಗೆ ತಮ್ಮ ಬಡ್ಡಿ ದರವನ್ನು ರೆಪೋ ದರಕ್ಕೆ ಲಿಂಕ್ ಮಾಡುವ ಅವಕಾಶವನ್ನು ಕೂಡ ಅನುಮತಿಸುತ್ತದೆ.
-
ಹೋಮ್ ಲೋನ್ ಮರುಪಾವತಿ ಅವಧಿ: ಮರುಪಾವತಿ ಅವಧಿಯು ನಿಮ್ಮ ಹೋಮ್ ಲೋನ್ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಲು ನೀವು ತೆಗೆದುಕೊಳ್ಳಬಹುದಾದ ಒಟ್ಟು ಸಮಯವಾಗಿದೆ. ದೀರ್ಘ ಅವಧಿಯು ಸಣ್ಣ ಇಎಂಐಗಳನ್ನು ಸುಲಭಗೊಳಿಸಬಹುದು ಆದರೆ ನಿಮ್ಮ ಒಟ್ಟು ಸಾಲದ ವೆಚ್ಚಕ್ಕೆ ಸೇರಿಸಬಹುದು.
ನೀವು ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ನಿಮ್ಮ ಇಎಂಐ ಮೊತ್ತವನ್ನು ಪೂರ್ವಭಾವಿಯಾಗಿ ಲೆಕ್ಕ ಹಾಕಲು ನೀವು ಹೋಮ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅನ್ನು ಬಳಸಬಹುದು.
ಹೌದು, ಬಜಾಜ್ ಹೌಸಿಂಗ್ ಫೈನಾನ್ಸ್ ಹೋಮ್ ಲೋನ್ ಸಾಲಗಾರರಿಗೆ ಶೆಡ್ಯೂಲ್ ಮುಂಚಿತವಾಗಿ ಲೋನನ್ನು ಮರುಪಾವತಿಸಲು ಅವಕಾಶ ನೀಡುತ್ತದೆ. ಇದನ್ನು ಮಾಡಲು ಪರಿಗಣಿಸಬಹುದಾದ ಎರಡು ವಿಧಾನಗಳು ಇಲ್ಲಿವೆ:
- ಭಾಗಶಃ-ಮುಂಪಾವತಿ: ನಿಮ್ಮ ಹೋಮ್ ಲೋನ್ ಅನ್ನು ಭಾಗಶಃ-ಮುಂಪಾವತಿ ಮಾಡುವ ಮೂಲಕ, ನಿಮ್ಮ ನಿಯಮಿತ ಇಎಂಐ ಪಾವತಿಗಳ ಮೇಲೆ ನೀವು ಲಂಪ್‌ಸಮ್ ಪಾವತಿಗಳನ್ನು ಮಾಡಬಹುದು ಮತ್ತು ನಿಮ್ಮ ಮರುಪಾವತಿ ಶೆಡ್ಯೂಲ್‌ಗಿಂತ ಮುಂಚಿತವಾಗಿ ನಿಮ್ಮ ಮರುಪಾವತಿ ಮೊತ್ತವನ್ನು ಕಡಿಮೆ ಮಾಡಬಹುದು.
- ಫೋರ್‌ಕ್ಲೋಸರ್: ನಿಮ್ಮ ಹೋಮ್ ಲೋನನ್ನು ಫೋರ್‌ಕ್ಲೋಸ್ ಮಾಡುವ ಮೂಲಕ, ನಿಮ್ಮ ಮರುಪಾವತಿ ಅವಧಿ ಮುಗಿಯುವ ಮೊದಲು ನೀವು ಅಗತ್ಯವಾಗಿ ಪೂರ್ಣ ಬಾಕಿ ಮೊತ್ತವನ್ನು ಒಂದೇ ಬಾರಿಗೆ ಮರುಪಾವತಿಸುತ್ತೀರಿ.
ಹೌದು, ನೀವು ಮತ್ತು ನಿಮ್ಮ ಸಂಗಾತಿಯು ನಿಮ್ಮ ಹೋಮ್ ಲೋನಿಗೆ ಜಂಟಿ ಹಣಕಾಸಿನ ಅರ್ಜಿದಾರರಾಗಬಹುದು. ಜಂಟಿ ಹೋಮ್ ಲೋನ್‌ಗೆ ಅಪ್ಲೈ ಮಾಡುವಲ್ಲಿ ಹಲವಾರು ಪ್ರಯೋಜನಗಳಿವೆ, ಅವುಗಳಲ್ಲಿ ಕೆಲವೆಂದರೆ:
- ವರ್ಧಿತ ಹೋಮ್ ಲೋನ್ ಅರ್ಹತೆ
- ಆದಾಯ ತೆರಿಗೆ ಉಳಿತಾಯಗಳು
- ವರ್ಧಿತ ಹೋಮ್ ಲೋನ್ ಮರುಪಾವತಿಯ ಸುಲಭ ಸೌಲಭ್ಯ
ಹಣಕಾಸಿನ ಸಹ-ಅರ್ಜಿದಾರರನ್ನು ಹೊಂದುವುದರಿಂದ ಸಾಮಾನ್ಯವಾಗಿ ಹೋಮ್ ಲೋನ್ ಅಪ್ಲಿಕೇಶನ್‌ಗಳಿಗೆ ಸಹಾಯ ಮಾಡುತ್ತದೆ ಏಕೆಂದರೆ ಇದು ನಿಮ್ಮ ಲೋನ್ ಅರ್ಹತೆ ಮತ್ತು ಮರುಪಾವತಿ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಡಿಮೆ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅರ್ಜಿದಾರರು ತಮ್ಮ ಹೋಮ್ ಲೋನ್ ಅಪ್ಲಿಕೇಶನ್ ಅನ್ನು ವಿಸ್ತರಿಸಲು ಹಣಕಾಸಿನ ಸಹ-ಅರ್ಜಿದಾರರೊಂದಿಗೆ ಅಪ್ಲೈ ಮಾಡಬಹುದು.
ಬಜಾಜ್ ಹೌಸಿಂಗ್ ಫೈನಾನ್ಸ್ ಸಾಲಗಾರರಿಗೆ ತಮ್ಮ ಅರ್ಹತೆಯ ಆಧಾರದ ಮೇಲೆ 32 ವರ್ಷಗಳವರೆಗೆ ವಿಸ್ತರಿಸಬಹುದಾದ ಮರುಪಾವತಿ ಅವಧಿಯೊಂದಿಗೆ ತಮ್ಮ ಸ್ವಂತ ವೇಗದಲ್ಲಿ ತಮ್ಮ ಹೋಮ್ ಲೋನ್‌ಗಳನ್ನು ಮರುಪಾವತಿಸಲು ಅನುಮತಿ ನೀಡುತ್ತದೆ.
ನಮ್ಮ ಅರ್ಹತಾ ಮಾನದಂಡಗಳನ್ನು ಪೂರೈಸುವ ಸಂಬಳ ಪಡೆಯುವ, ವೃತ್ತಿಪರ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರು ನಮ್ಮಲ್ಲಿ ಹೋಮ್ ಲೋನಿಗೆ ಅಪ್ಲೈ ಮಾಡಬಹುದು. ಸಂಬಳ ಪಡೆಯುವ ಮತ್ತು ಸ್ವಯಂ ಉದ್ಯೋಗಿ ಅರ್ಜಿದಾರರಿಗೆ ಅರ್ಹತಾ ಮಾನದಂಡಗಳು ಇಲ್ಲಿವೆ:
ಸಂಬಳ ಪಡೆಯುವ ವ್ಯಕ್ತಿಗಳು | ಸ್ವಯಂ ಉದ್ಯೋಗಿ ವ್ಯಕ್ತಿಗಳು |
---|---|
ಅರ್ಜಿದಾರರು ಸಾರ್ವಜನಿಕ ಅಥವಾ ಖಾಸಗಿ ಕಂಪನಿಯಿಂದ ಸ್ಥಿರ ಸಂಬಳದ ಆದಾಯದ ಮೂಲದೊಂದಿಗೆ ಕನಿಷ್ಠ 3 ವರ್ಷಗಳ ಕೆಲಸದ ಅನುಭವದೊಂದಿಗೆ ಬಹುರಾಷ್ಟ್ರೀಯ ಕಂಪನಿ ಉದ್ಯೋಗಿಯಾಗಿರಬೇಕು | ಅರ್ಜಿದಾರರು ಪ್ರಸ್ತುತ ಉದ್ಯಮದಲ್ಲಿ 3 ವರ್ಷಗಳಿಗಿಂತ ಹೆಚ್ಚಿನ ಬಿಸಿನೆಸ್ ಮುಂದುವರಿಕೆಯೊಂದಿಗೆ ಸ್ವಯಂ ಉದ್ಯೋಗಿಯಾಗಿರಬೇಕು |
ಅವರು ಭಾರತೀಯ ನಿವಾಸಿ ಅಥವಾ ಎನ್ಆರ್‌ಐ ಆಗಿರಬೇಕು | ಅವರು ಭಾರತೀಯ ನಾಗರಿಕರಾಗಿರಬೇಕು (ನಿವಾಸಿ ಮಾತ್ರ) |
ಆತ/ಆಕೆ ಭಾರತೀಯ ನಾಗರಿಕರಾಗಿರಬೇಕು | ಆತ/ಆಕೆ ಭಾರತದ ನಿವಾಸಿ ನಾಗರಿಕರಾಗಿರಬೇಕು |
ಟಾಪ್-ಅಪ್ ಲೋನ್ ಸಾಮಾನ್ಯವಾಗಿ ಅರ್ಹತಾ ಮಾನದಂಡಗಳನ್ನು ಪೂರೈಸುವ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್ ಅರ್ಜಿದಾರರಿಗೆ ಲಭ್ಯವಿರುವ ರಿಫೈನಾನ್ಸಿಂಗ್ ಆಯ್ಕೆಯಾಗಿದೆ. ಸಾಲಗಾರರು ಬ್ಯಾಲೆನ್ಸ್ ಟ್ರಾನ್ಸ್‌ಫರ್ ಸೌಲಭ್ಯ ಪಡೆದಾಗ, ಅವರು ಮನೆ ನವೀಕರಣದಂತಹ ಮನೆ ವೆಚ್ಚಗಳಿಗಾಗಿ ರೂ. 1 ಕೋಟಿ* ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಕೂಡ ಪಡೆಯಬಹುದು.
ನಿರೀಕ್ಷಿತ ಹೋಮ್ ಲೋನ್ ಅರ್ಜಿದಾರರು ಹೋಮ್ ಲೋನಿಗೆ ಅಪ್ಲೈ ಮಾಡುವ ಮೊದಲು ಮತ್ತು ತ್ವರಿತ ಲೋನ್ ಅನುಮೋದನೆಯ ಅವಕಾಶಗಳನ್ನು ಅತ್ಯುತ್ತಮಗೊಳಿಸಲು ತಮ್ಮ ಲೋನ್ ಅರ್ಹತೆಯನ್ನು ಪರಿಶೀಲಿಸಲು ಹೋಮ್ ಲೋನ್ ಅರ್ಹತಾ ಕ್ಯಾಲ್ಕುಲೇಟರ್ ಬಳಸಬಹುದು. ಕ್ಯಾಲ್ಕುಲೇಟರ್ ಬಳಸುವ ಹಂತಗಳು ಇಲ್ಲಿವೆ:
-
ಡ್ರಾಪ್-ಡೌನ್ ಮೆನುವಿನಿಂದ ನೀವು ನಿಮ್ಮ ಆಸ್ತಿಯನ್ನು ಖರೀದಿಸಲು ಬಯಸುವ ನಗರವನ್ನು ಆಯ್ಕೆಮಾಡಿ.
-
ನಿಮ್ಮ ಹುಟ್ಟಿದ ದಿನಾಂಕವನ್ನು ನಮೂದಿಸಿ.
-
ನಿಮ್ಮ ಮಾಸಿಕ ಆದಾಯವನ್ನು ಘೋಷಿಸಲು ಸ್ಲೈಡರ್ ಬಳಸಿ.
-
ನಿಮ್ಮ ಮಾಸಿಕ ಜವಾಬ್ದಾರಿಗಳನ್ನು ಘೋಷಿಸಲು ಮುಂದಿನ ಸ್ಲೈಡರ್ ಬಳಸಿ.
ನಂತರ ನೀವು ಅರ್ಹರಾಗಿರುವ ಹೋಮ್ ಲೋನ್ ಮೊತ್ತವನ್ನು ಕ್ಯಾಲ್ಕುಲೇಟರ್ ವಿಂಡೋ ತೋರಿಸುತ್ತದೆ.
ಬಜಾಜ್ ಹೌಸಿಂಗ್ ಫೈನಾನ್ಸ್‌ನೊಂದಿಗೆ ಹೋಮ್ ಲೋನಿಗೆ ಅಪ್ಲೈ ಮಾಡುವುದು ಸುಲಭ ಮತ್ತು ತೊಂದರೆ ರಹಿತ ತ್ವರಿತ ಪ್ರಕ್ರಿಯೆಯಾಗಿದೆ. ನಿಮ್ಮ ಅಪ್ಲಿಕೇಶನ್ ಪೂರ್ಣಗೊಳಿಸಲು ಈ ಕೆಳಗೆ ನಮೂದಿಸಿದ ಹಂತಗಳನ್ನು ಅನುಸರಿಸಿ:
-
ಹೌಸಿಂಗ್ ಲೋನ್ ಅಪ್ಲಿಕೇಶನ್ ಫಾರ್ಮ್‌ಗೆ ನ್ಯಾವಿಗೇಟ್ ಮಾಡಿ.
-
ನಿಮ್ಮ ಪೂರ್ಣ ಹೆಸರು, ಮೊಬೈಲ್ ನಂಬರ್, ಉದ್ಯೋಗ ಪ್ರಕಾರ ಮತ್ತು ವಸತಿ ಮತ್ತು ಹಣಕಾಸಿನ ಮಾಹಿತಿಯಂತಹ ನಿಮ್ಮ ಪ್ರಮುಖ ವಿವರಗಳನ್ನು ನಮೂದಿಸಿ.
-
ನಿಮಗೆ ಅಗತ್ಯವಿರುವ ಹೋಮ್ ಲೋನ್ ಪ್ರಕಾರವನ್ನು ಆಯ್ಕೆಮಾಡಿ - ಹೋಮ್ ಲೋನ್ ಅಥವಾ ಹೋಮ್ ಲೋನ್ ಬ್ಯಾಲೆನ್ಸ್ ಟ್ರಾನ್ಸ್‌ಫರ್.
-
ಒಟಿಪಿ ಜನರೇಟ್ ಮಾಡಿ ಮತ್ತು ಮುಂದಿನ ಹಂತಕ್ಕೆ ಹೋಗಲು ಅದನ್ನು ನಮೂದಿಸಿ.
-
ಕೋರಲಾದಂತೆ ಎಲ್ಲಾ ಹಣಕಾಸಿನ ವಿವರಗಳನ್ನು ನಮೂದಿಸಿ ಮತ್ತು ಫಾರ್ಮ್ ಪೂರ್ಣಗೊಳಿಸಿ. ಗಮನಿಸಿ: ನೀವು ಭರ್ತಿ ಮಾಡಬೇಕಾದ ಕ್ಷೇತ್ರಗಳು ನಿಮ್ಮ ಉದ್ಯೋಗ ಪ್ರಕಾರದ ಆಧಾರದ ಮೇಲೆ ಬದಲಾಗಬಹುದು.
-
ಅರ್ಜಿ ಸಲ್ಲಿಸಿ.
ನಮ್ಮ ಗ್ರಾಹಕ ಪ್ರತಿನಿಧಿ ಶೀಘ್ರದಲ್ಲೇ ನಿಮ್ಮನ್ನು ಸಂಪರ್ಕಿಸುತ್ತಾರೆ.
*ನಿಯಮ ಮತ್ತು ಷರತ್ತುಗಳು ಅನ್ವಯವಾಗುತ್ತವೆ.
ಸಂಬಂಧಿತ ಲೇಖನಗಳು
![](/documents/37350/146866/Related+Articals+1.webp/d4e65cb6-7a0f-1b47-585e-ce3bbd711513?t=1660719695220)
ನಿಮ್ಮ ಹೋಮ್ ಲೋನ್ ಇಎಂಐ ಅನ್ನು ಲೆಕ್ಕ ಹಾಕುವುದು ಹೇಗೆ
342 3 ನಿಮಿಷ
![](/documents/37350/146866/Related+Articals+3.webp/ca78315e-6825-fe15-4ed9-f790ef8aa703?t=1660719695762)
ಭಾರತದಲ್ಲಿ ಲಭ್ಯವಿರುವ ಲೋನ್ಗಳ ವಿಧಗಳು
378 4 ನಿಮಿಷ
ಇದು ಕೂಡ ಜನರ ಪರಿಗಣನೆಗೆ
![](/documents/37350/146863/PAC-1.webp/f0bc2aae-fc5b-a450-e33b-cf430ff41975?t=1660719674920)
![](/documents/37350/146863/PAC-2.webp/69b9d34c-61c4-ccc5-9123-c49ffa80e4c8?t=1660719675219)
![](/documents/37350/146863/PAC-3.webp/c3ab9c67-e732-d04b-ea7a-1a08dc1704fe?t=1660719675487)
![](/documents/37350/146863/PAC-4.webp/430888c0-b454-2b38-f33c-35fbbecfbec3?t=1660719675748)
![Online Home Loan](/documents/37350/45758/online-home-loan.png/ed86d575-9def-d656-3820-835ae17104ec?t=1648290493595)